ಗಳಿಕೆ ರಜೆ ನಗದೀಕರಣ 2025 ಆದೇಶ – download pdf, EL encahment order

ಕರ್ನಾಟಕ ಸರ್ಕಾರವು 2025ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲಾ ವೃಂದದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರಿಗೆ ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಸರ್ಕಾರಕ್ಕೆ ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಜಾರಿಗೊಳಿಸಿ ದಿನಾಂಕ:17/01/2025ರಂದು ಆದೇಶವನ್ನು ಹೊರಡಿಸಿದೆ.

ಗಳಿಕೆ ರಜೆ ನಗದೀಕರಣ - EL encashment 2025
ಗಳಿಕೆ ರಜೆ ನಗದೀಕರಣ - EL encashment 2025

ಈ ಸೌಲಭ್ಯವು ದಿನಾಂಕ:01/01/2025 ರಿಂದ 31/12/2025 ರ ವರೆಗೆ ಜಾರಿಯಲ್ಲಿರುತ್ತದೆ.

ಗಳಿಕೆ ರಜೆ ನಗದೀಕರಣ 2025 ಆದೇಶದ ಮುಖ್ಯಾಂಶಗಳು:

  • ಗರಿಷ್ಟ 15 ದಿನಗಳ ಗಳಿಕೆ ರಜೆಯ ನಗದೀಕರಣ: ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು 2025ನೇ ಕ್ಯಾಲೆಂಡರ್‌ ವರ್ಷದಲ್ಲಿ ಗರಿಷ್ಟ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಸರ್ಕಾರಕ್ಕೆ ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯವನ್ನು ಪಡೆಯಬಹುದು.
  • ಅರ್ಜಿ ಸಲ್ಲಿಸುವ ಅವಧಿ: ಈ ಸೌಲಭ್ಯವನ್ನು ಎಲ್ಲಾ ವೃಂದದ ಅರ್ಹ ಸರ್ಕಾರಿ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ನೀಡಿ ಅವರ ಇಚ್ಛೆಯ ಯಾವುದೇ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದಾಗಿದೆ.
  • KCSR ನಿಯಮ 118 ಅನ್ವಯ ಷರತ್ತುಗಳು:

    ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 118 ರಲ್ಲಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಇತರೆ ಷರತ್ತುಗಳು ಈ ಸೌಲಭ್ಯ ಪಡೆಯಲು ಅನ್ವಯವಾಗುತ್ತವೆ.

ಗಳಿಕೆ ರಜೆ ನಗದೀಕರಣ 2025 ಕ್ಕೆ ಸಂಬಂಧಿಸಿದ ಸರ್ಕಾರದ ಆದೇಶವನ್ನು download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ

ಗಳಕೆ ರಜೆ ನಗದೀಕರಣ  ಆದೇಶ 2025- EL encashment .pdf

ಗಳಿಕೆ ರಜೆ ನಗದೀಕರಣದ ಅರ್ಜಿ ನಮೂನೆಯನ್ನು download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

ಗಳಕೆ ರಜೆ ನಗದೀಕರಣ  ಅರ್ಜಿ ನಮೂನೆ- EL encashment form .pdf

ಹೆಚ್ಚಿನ ಮಾಹಿತಿಗಾಗಿ  ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ವೀಕ್ಷಿಸಿ.  www.finance.karnataka.gov.in

Scroll to Top