ರಜಾ ದಿನಗಳು – 2025 – Holiday list

ರಜಾ ದಿನಗಳು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗಗಳಾಗಿವೆ. ವಿದ್ಯಾರ್ಥಿಯಾಗಿರಲಿ ಅಥವಾ ಕೆಲಸ ಮಾಡುವ ವ್ಯಕ್ತಿಯಾಗಿರಲಿ ಪ್ರತಿಯೊಬ್ಬರಿಗೂ ವಿಶ್ರಾಂತಿ ಪಡೆಯಲು ಮತ್ತು ಮನೆಯವರೊಂದಿಗೆ ಹಾಗೂ ಗೆಳೆಯರೊಂದಿಗೆ ಸಂತೋಷದ ಸಮಯವನ್ನು ಕಳೆಯಲು ರಜೆಗಳು ಅವಶ್ಯಕವಾಗಿವೆ. ರಜಾದಿನಗಳು ನಮ್ಮ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತವೆ. 

ಹಾಗಾಗಿ ರಾಜ್ಯ ಸರ್ಕಾರವು ಸಹ ಪ್ರತಿ ವರ್ಷ ತನ್ನ ನೌಕರರಿಗೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಸಾರ್ವತ್ರಿಕ ರಜಾ ದಿನಗಳು - 2025

ಕರ್ನಾಟಕ ಸರ್ಕಾರವು 2025ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತಿ ರಜಾ ದಿನಗಳ ಪಟ್ಟಿಯನ್ನು ದಿನಾಂಕ:21/11/2024ರಂದು ಹೊರಡಿಸಿರುವ ಅಧಿಸೂಚನೆಯ ಮೂಲಕ ಬಿಡುಗಡೆ ಮಾಡಿದೆ.

ಪ್ರಮುಖ ಅಂಶಗಳು:

  • 2025ನೇ ಸಾಲಿಗೆ ಒಟ್ಟು 19 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಹಾಗೂ
  • ಎಂದಿನಂತೆ ಎಲ್ಲಾ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಂದು ರಜೆ ಇರಲಿವೆ.
  • ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26/01/2025), ಯುಗಾದಿ ಹಬ್ಬ (30/03/2025), ಮೊಹರಂ ಕಡೆ ದಿನ (06/07/2025) ಮತ್ತು ಮಹಾಲಯ ಅಮವಾಸ್ಯೆ (21/09/2025) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ(08/11/2025)ಗಳನ್ನು ಈ ರಜಾ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ.
  • ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳನ್ನು ಮುಚ್ಚಲಾಗಿರುತ್ತದೆ.

ಈ ಕೆಳಕಂಡ ದಿನಗಳನ್ನು ಸಾರ್ವತ್ರಿಕ ರಜೆ ಎಂದು ಪ್ರಕಟಿಸಲಾಗಿದೆ.

ದಿನಾಂಕ
ವಾರಗಳು
ಸಾರ್ವತ್ರಿಕ ರಜಾ ದಿನಗಳು
14-01-2025
ಮಂಗಳವಾರ
ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26-02-2025
ಬುಧವಾರ
ಮಹಾ ಶಿವರಾತ್ರಿ
31-03-2025
ಸೋಮವಾರ
ಖುತುಬ್‌-ಎ-ರಂಜಾನ್‌
10-04-2025
ಗುರುವಾರ
ಮಹಾವೀರ ಜಯಂತಿ
14-04-2025
ಸೋಮವಾರ
ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
18-04-2025
ಶುಕ್ರವಾರ
ಗುಡ್‌ ಫ್ರೈಡೆ
30-04-2025
ಬುಧವಾರ
ಬಸವ ಜಯಂತಿ, ಅಕ್ಷಯ ತೃತೀಯ
01-05-2025
ಗುರುವಾರ
ಕಾರ್ಮಿಕ ದಿನಾಚರಣೆ
07-06-2025
ಶನಿವಾರ
ಬಕ್ರೀದ್
15-08-2025
ಶುಕ್ರವಾರ
ಸ್ವಾತಂತ್ರ್ಯ ದಿನಾಚರಣೆ
27-08-2025
ಬುಧವಾರ
ವರಸಿದ್ಧಿ ವಿನಾಯಕ ವ್ರತ
05-09-2025
ಶುಕ್ರವಾರ
ಈದ್‌-ಮಿಲಾದ್‌
01-10-2025
ಬುಧವಾರ
ಮಹಾನವಮಿ, ಆಯುಧ ಪೂಜೆ, ವಿಜಯ ದಶಮಿ
02-10-2025
ಗುರುವಾರ
ಗಾಂಧಿ ಜಯಂತಿ
07-10-2025
ಮಂಗಳವಾರ
ಮಹರ್ಷಿ ವಾಲ್ಮೀಕಿ ಜಯಂತಿ
20-10-2025
ಸೋಮವಾರ
ನರಕ ಚತುರ್ದಶಿ
22-10-2025
ಬುಧವಾರ
ಬಲಿಪಾಡ್ಯಮಿ, ದೀಪಾವಳಿ
01-11-2025
ಶನಿವಾರ
ಕನ್ನಡ ರಾಜ್ಯೋತ್ಸವ
25-12-2025
ಗುರುವಾರ
ಕ್ರಿಸ್‌ಮಸ್‌

2025ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳಿಗೆ ಸಂಬಂಧಿಸಿದಂತೆ, ಸರ್ಕಾರದ ಅಧಿಸೂಚನೆಯ Pdf ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಕೆಳಗಿನ ಡೌನ್‌ಲೋಡ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.

ಕರ್ನಾಟಕ ಸರ್ಕಾರದ ತುಟ್ಟಿಭತ್ಯೆ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

ಕರ್ನಾಟಕ ಸರ್ಕಾರದ ತುಟ್ಟಿಭತ್ಯೆ ಆದೇಶಗಳು

7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳು

ಹಬ್ಬದ ಮುಂಗಡಕ್ಕೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

ಹಬ್ಬದ ಮುಂಗಡ ಅರ್ಜಿ ಮತ್ತು ಆದೇಶಗಳು

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

Scroll to Top