ಕೆಪಿಎಸ್‌ಸಿ ಇಲಾಖಾ ಪರೀಕ್ಷೆಗಳು 2024 – ದ್ವಿತೀಯ ಅಧೀವೇಶನ​ – Compulsory for promotions and other benefits

KPSC Departmental Exams 2024 – 2nd session – Notification

ಪರೀಕ್ಷೆ ಹೆಸರು
2024ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳು
ಇಲಾಖೆ
KPSC (ಕರ್ನಾಟಕ ಲೋಕಸೇವಾ ಆಯೋಗ)
ಅಧಿಸೂಚನೆ ಸಂಖ್ಯೆ
ಪಿಎಸ್‌ಸಿ 538ಇಪ /2024-25/554
ಅಧಿಸೂಚನೆ ದಿನಾಂಕ
21-12-2024
ಅರ್ಹತೆ
1) ಸರ್ಕಾರಿ ನೌಕರರು.
2) ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ /ಮಂಡಳಿ/ ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳು/ ಪ್ರಾಧಿಕಾರಿಗಳ ಖಾಯಂ ನೌಕರರು.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ
30-12-2024
ಅರ್ಜಿ ಸಲ್ಲಸಲು ಕೊನೆಯ ದಿನಾಂಕ
29-01-2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ
31-01-2025
ಅರ್ಜಿ ಸಲ್ಲಿಸುವ ವಿಧಾನ
Online - ಸೇವಾ ಸಿಂಧುವಿನ ಪೋರ್ಟಲ್‌ ಮುಖಾಂತರ
Appplication Link
Notification
Payment Method
Online

ವಿವರಣೆ:

ಕೆಪಿಎಸ್‌ಸಿಯು ದಿನಾಂಕ: 21-12-2024ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ 2024ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಆನಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಇದು ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ವಿಚಾರವಾಗಿದೆ. ಏಕೆಂದರೆ ಈ ಪರೀಕ್ಷೆಗಳು ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ತಮ್ಮ ವೃತ್ತಿ ಅರ್ಹತೆಗಳನ್ನು ಹೆಚ್ಚಿಸಿಕೊಳ್ಳಲು, ಪದೋನ್ನತಿ ಪಡೆಯಲು ಮತ್ತು ತಮ್ಮ ಇಲಾಖೆಯಲ್ಲಿನ ಉನ್ನತ ಸ್ಥಾನಗಳಿಗೆ ಪ್ರವೇಶ ಪಡೆಯಲು ಅವಕಾಶ ನೀಡುತ್ತವೆ.

ಕೆಪಿಎಸ್‌ಸಿ ಈ ಪರೀಕ್ಷೆಗಳನ್ನು ವಿವಿಧ ಗುಂಪಿನ ಸರ್ಕಾರಿ ನೌಕರರಿಗೆ ಆಯೋಜಿಸುತ್ತದೆ. 

Table of Contents

ಗಮನಾರ್ಹ ದಿನಾಂಕಗಳು:

  • ಅಧಿಸೂಚನೆಯ ಬಿಡುಗಡೆ ದಿ: 21-12-2024
  • ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿ: 30-12-2024
  • ಅರ್ಜಿ ಸಲ್ಲಿಸಲು ಕೊನೆಯ ದಿ: 29-01-2025
  • ಶುಲ್ಕ ಪಾವತಿಸಲು ಕೊನೆಯ ದಿ: 31-01-2025

ಅರ್ಹತೆ:

  1. ಸರ್ಕಾರಿ ನೌಕರರು,
  2. ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ನಿಗಮ /ಮಂಡಳಿ/ ಸ್ಥಳೀಯ ಸಂಸ್ಥೆಗಳು / ವಿಶ್ವವಿದ್ಯಾಲಯಗಳು/ ಪ್ರಾಧಿಕಾರಿಗಳ ಖಾಯಂ ನೌಕರರು.

ಗೂಪ್‌ -ಡಿ ನೌಕರರು ಇಲಾಖಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:

  • ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು KPSC ಜಾಲತಾಣ http://www.kpsc.kar.nic.in ನ Home page ನಲ್ಲಿರುವ Apply Online for Various Notification ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • ನಂತರ Click here to apply Online Application for Departmental Examination-2024-II session ಮೇಲೆ ಕ್ಲಿಕ್‌ ಮಾಡಿದ ನಂತರ ಸೇವಾ ಸಿಂಧುವಿನ ಪೋರ್ಟಲ್‌ ಅಡಿ ಇಲಾಖಾ ಪರೀಕ್ಷೆಯ ಅರ್ಜಿ ಸಲ್ಲಿಸುವ ನಮೂನೆ ಕಾಣಿಸಿಕೊಳ್ಳುತ್ತದೆ.
  • ಅರ್ಜಿದಾರರು ಸೇವಾ ಸಿಂಧುವಿನಲ್ಲಿ ಈಗಾಗಲೇ ಖಾತೆ ಹೊಂದಿದ್ದಲ್ಲಿ ಅಂತಹವರು ತಮ್ಮ username & password ಅಥವಾ mobile number OTP ಬಳಸಿ ಪೋರ್ಟಲ್‌ನಲ್ಲಿ ಲಾಗಿನ್‌ ಆಗಬೇಕು.
  • ಅರ್ಜಿದಾರರು ಸೇವಾ ಸಿಂಧುವಿನಲ್ಲಿ ಖಾತೆ ಹೊಂದಿಲ್ಲದೆ ಇದ್ದರೆ, ಅಭ್ಯರ್ಥಿಯು New User? Register here ಮೇಲೆ ಕ್ಲಿಕ್‌ ಮಾಡಿ ಯಶಸ್ವಿಯಾಗಿ Register ಆದ ನಂತರ, ತಮ್ಮ username & password ಅಥವಾ mobile number OTP ಬಳಸಿ ಪೋರ್ಟಲ್‌ನಲ್ಲಿ ಲಾಗಿನ್‌ ಆಗಬೇಕು.
  • ಒಮ್ಮೆ ಲಾಗಿನ್‌ ಆದ ನಂತರ ಅಭ್ಯರ್ಥಿಯು Home Page ಮೇಲಿರುವ “Apply for KPSC Departmental Exam” ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಕು. ನಂತರ ಆನ್‌ಲೈನ್‌ ಅರ್ಜಿಯ ಮುಖಪುಟ ತೆರೆದುಕೊಳ್ಳುತ್ತದೆ.
  • ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ಅವಶ್ಯಕ ಸೂಚನೆಗಳನ್ನು ಓದಿಕೊಂಡು ನಂತರ ನಮೂನೆ ಭರ್ತಿ ಮಾಡಬೇಕು. ನಂತರ Submit ಬಟನ್‌ ಒತ್ತಿದಾಗ ಭರ್ತಿ ಮಾಡಿದ ಅರ್ಜಿಯ Preview ಲಭ್ಯವಾಗುತ್ತದೆ. ಭರ್ತಿ ಮಾಡಿದ ಎಲ್ಲಾ ಮಾಹಿತಿಯು ಸರಿಯಾಗಿದ್ದಲ್ಲಿ Attach Annexure ಮೇಲೆ ಕ್ಲಿಕ್‌ ಮಾಡಿ ಅವಶ್ಯಕ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ʼSave Annexureʼ ಮೇಲೆ ಕ್ಲಿಕ್‌ ಮಾಡಬೇಕು.
  • ನಂತರ ʼe-signʼ ಮೇಲೆ ಮತ್ತು Make Payment ಮೇಲೆ ಕ್ಲಿಕ್‌ ಮಾಡಿ ಶುಲ್ಕವನ್ನು ಸಂದಾಯ ಮಾಡಬೇಕು.
  • ಒಮ್ಮೆ ಅರ್ಜಿಯನ್ನು Submit ಮಾಡಿದ ನಂತರ ಸ್ವೀಕೃತಿ ನಮೂನೆಯು ಜನರೇಟ್‌ ಆಗುತ್ತದೆ. ಈ ಅರ್ಜಿಯ ಸಂಖ್ಯೆಯನ್ನು ಮುಂದಿನ ಪತ್ರ ವ್ಯವಹಾರಕ್ಕೆ ಉಪಯೋಗಿಸಬೇಕು.

ಪರೀಕ್ಷಾ ಕೇಂದ್ರಗಳು:

ಒಟ್ಟು 03 ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

  1. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಂತರ,
  2. ವಿಭಾಗೀಯ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ನಂತರ,
  3. ಬೆಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ.

ವಿವಿಧ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ನಡೆಸಲಾಗುವ ಪರೀಕ್ಷಾ ವೇಳಾ ಪಟ್ಟಿಯನ್ನು ನಂತರ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

Departmental Exam 2024 - 2nd Session

ಪರೀಕ್ಷೆ ಬರೆಯುವ ವಿಧಾನ:

ಕೆಲವು ಪತ್ರಿಕೆಗಳಿಗೆ ಪಠ್ಯಪುಸ್ತಕಗಳನ್ನು(Books) ಉಪಯೋಗಿಸಿ ಪರೀಕ್ಷೆ ಬರೆಯಬಹುದಾಗಿದೆ. ಉದಾ: ಅಕೌಂಟ್ಸ್‌ ಲೋಯರ್‌, ಅಕೌಂಟ್ಸ್‌ ಹೈಯರ್‌, ಜನರಲ್‌ ಲಾ ಭಾಗ-1 ಮತ್ತು ಜನರಲ್‌ ಲಾ ಭಾಗ-2  etc.

ವಿನಾಯಿತಿ:

ನಿಯಮಾನುಸಾರ, ಹಿಂದಿನ  ಇಲಾಖಾ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇರೆಗೆ ಹಾಗೂ ಅಭ್ಯರ್ಥಿಗಳು ಹೊಂದಿರುವ ವಿದ್ಯಾರ್ಹತೆ ಮೇರೆಗೆ ಕೆಲವು ವಿಷಯಗಳು/ಪತ್ರಿಕೆಗಳಿಕೆ ವಿನಾಯಿತಿಯನ್ನು ನೀಡಲಾಗುತ್ತದೆ.

FAQ (frequently asked questions):

1) ಈ ಪರೀಕ್ಷೆಗಳು ಬರೆಯಲು ಯಾರು ಅರ್ಹರು?

ಕರ್ನಾಟಕದ ಸರ್ಕಾರಿ ನೌಕರರು.

ಇಲ್ಲ. ಕೇವಲ Online ಮುಖಾಂತರ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಇಲ್ಲ.

ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬೇಕು.

ಹೌದು. ಕೆಲವು ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಹುಡುಕಲು ಪುಸ್ತಕಗಳನ್ನು ಉಪಯೋಗಿಸಬಹುದು.

ಕೆಪಿಎಸ್‌ಸಿ ಇಲಾಖಾ ಪರೀಕ್ಷೆಗಳು 2024 – ಪ್ರಥಮ ಅಧೀವೇಶನದ ಫಲಿತಾಂಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

ಇಲಾಖಾ ಪರೀಕ್ಷೆಗಳು 2024 – ಪ್ರಥಮ ಅಧೀವೇಶನದ ಫಲಿತಾಂಶಗಳು

ಹೆಚ್ಚಿನ ಮಾಹಿತಿಗಾಗಿ KPSC(ಕರ್ನಾಟಕ ಲೋಕಸೇವಾ ಆಯೋಗ)ಯ ಅಧಿಕೃತ ಜಾಲತಾಣವಾದ https://kpsc.kar.nic.in/ ಗೆ ಭೇಟಿ ನೀಡಿ.

ಕರ್ನಾಟಕ ಸರ್ಕಾರದ ತುಟ್ಟಿಭತ್ಯೆ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

ಕರ್ನಾಟಕ ಸರ್ಕಾರದ ತುಟ್ಟಿಭತ್ಯೆ ಆದೇಶಗಳು

 

7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ ಮಾಡಿ.

7ನೇ ರಾಜ್ಯ ವೇತನ ಆಯೋಗಕ್ಕೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಆದೇಶಗಳು

Scroll to Top