ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದಿನಾಂಕ:26/12/2024ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರು ನಡದು ಬಂದ ದಾರಿ:
ಪ್ರಸ್ತುತ ಪಾಕಿಸ್ತಾನದಲ್ಲಿರುವ ಪಂಜಾಬ್ನ ಗಹ್ ಗ್ರಾಮದಲ್ಲಿ1932ರ ಸೆಪ್ಟೆಂಬರ್ 26ರಂದು, ಜನಿಸಿದ ಡಾ. ಮನಮೋಹನ್ ಸಿಂಗ್ರವರು ಅರ್ಥಶಾಸ್ತ್ರದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಪದವಿ ಪಡೆದ ಅವರು, ಆರ್ಥಿಕತಜ್ಞರು ಮತ್ತು ತಂತ್ರಜ್ಞಾನ ತಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆರ್ಥಿಕ ಸಚಿವರಾಗಿ ಅವರು ಭಾರತದ ಆರ್ಥಿಕ ದಿಕ್ಕನ್ನೆ ಬದಲಿಸಿದರು. ನಂತರ ಪ್ರಧಾನಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿಗಳ ನಿಧನವು ಭಾರತಕ್ಕೆ ಅತಿ ದೊಡ್ಡ ನಷ್ಟವಾಗಿದೆ. ಅವರು ನಮ್ಮನ್ನು ಅಗಲಿರಬಹುದು ಆದರೆ ಅವರು ರೂಪಿಸಿದ ಆರ್ಥಿಕ ನೀತಿಗಳು ಭಾರತವನ್ನು ಇನ್ನೂ ವರ್ಷಗಟ್ಟಲೆ ಪ್ರಭಾವಿತಗೊಳಿಸುತ್ತದೆ.
ರಜೆ ಘೋಷಣೆ?
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ – ಕಾಲೇಜುಗಳಿಗೆ ದಿನಾಂಕ:27/12/2024ರಂದು ರಜೆಯನ್ನು ಘೋಷಣೆ ಮಾಡಲಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಎಲ್ಲರೂ ಪ್ರಾರ್ಥಿಸೋಣ.