KPSC ನಡೆಸಿದ 2024ನೇ ಸಾಲಿನ ಪ್ರಥಮ ಅಧಿವೇಶನದ(1st Session) ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರುವ ಅಭ್ಯರ್ಥಿಗಳು ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು (Pass Certificate) ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.

ಪ್ರಮಾಣ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುಸರಿಸಬೇಕಾದ ವಿಧಾನ:
- ಲಿಂಕ್ (Certificate Download Link) ಅನ್ನು ಕ್ಲಿಕ್ ಮಾಡಿದ ನಂತರ ಸೇವಾಸಿಂಧು ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಆಗ ನೀವು ನಿಮ್ಮ Login Id ಮತ್ತು Password ಗಳನ್ನು ನಮೂದು ಮಾಡಿ.
Login ID : ನೊಂದಣಿ ಸಂಖ್ಯೆ / Registration Number. (7ಅಂಕಿ).
Password: ಪ್ಯಾನ್ ನಂಬರ್
- ಲಾಗಿನ ಆದ ನಂತರ ಡಿಜಿಲಾಕರ್ (Digilocker) ಪೇಜ್ ತೆರೆದುಕೊಳ್ಳುತ್ತದೆ. ಆಗ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ(Aadhar number)ಯನ್ನು ನಮೂದಿಸಿ Next ಬಟನ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ OTP ಬರುತ್ತದೆ. OTPಯನ್ನು ನಮೂದು ಮಾಡಿ SUBMIT ಅನ್ನು ಕ್ಲಿಕ್ ಮಾಡಿ.
- ಆಗ 6 digit Security Pin ಅನ್ನು ಕೇಳುತ್ತದೆ. ನೀವು ಈಗಾಗಲೇ Digilocker Account ಅನ್ನು create ಮಾಡಿದ್ದರೆ ನಿಮ್ಮ 6 digit Security Pin ಅನ್ನು ನಮೂದು ಮಾಡಿ Done ಮೇಲೆ ಕಿಕ್ ಮಾಡಿ. (ಇಲ್ಲದಿದ್ದರೆ, Forgot my Pin ಅನ್ನು ಕ್ಲಿಕ್ ಮಾಡಿ ಕೇಳಿದ ಮಾಹಿತಿಯನ್ನು ನಮೂದಿಸಿ 6 digit Security Pin ಅನ್ನು create ಮಾಡಿ.)
- ನಂತರ Allow ಮೇಲೆ ಕ್ಲಿಕ್ ಮಾಡಿ.
ಲಾಗಿನ್ ಆಗಿ 3ರಿಂದ 4 ಗಂಟೆಗಳೊಳಗಾಗಿ ಉತ್ತೀರ್ಣತಾ ಪತ್ರಗಳನ್ನು ಪಡೆಯಬಹುದು.
Passing Certificateಗಳನ್ನು ಡಿಜಿಲಾಕರ್ (Digilocker) ಅಕೌಂಟ್ಸ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.
Certificate ಗಳನ್ನು ಡಿಜಿಲಾಕರ್ ಜಾಲತಾಣ ಅಥವಾ App ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

- ಡಿಜಿಲಾಕರ್ ಜಾಲತಾಣ ಅಥವಾ Appಗೆ Sign in ಆಗಿ
- Website ಆಗಿದ್ದರೆ, Digilocker ಜಾಲತಾಣಕ್ಕೆ Sign in ಆದ ನಂತರ, ಎಡಗಡೆ Issued Documents ಮೇಲೆ ಕ್ಲಿಕ್ ಮಾಡಿ. ಅಲ್ಲಿ Examination Result Certificate ಅನ್ನು ಕಿಕ್ ಮಾಡಿ ಉತ್ತೀರ್ಣತಾ ಪತ್ರಗಳನ್ನು (Pass Certificate) ಡೌನ್‌ಲೋಡ್ ಮಾಡಿಕೊಳ್ಳಿ.
- Mobile ಆಗಿದ್ದರೆ, Digilocker App ಅನ್ನು Open ಮಾಡಿದ ನಂತರ ಕೆಳಗಡೆ Issued Documents ಮೇಲೆ ಕ್ಲಿಕ್ ಮಾಡಿ. ಅಲ್ಲಿ Examination Result Certificate ಅನ್ನು ಕಿಕ್ ಮಾಡಿ ಉತ್ತೀರ್ಣತಾ ಪತ್ರಗಳನ್ನು (Pass Certificate) ಡೌನ್‌ಲೋಡ್ ಮಾಡಿಕೊಳ್ಳಿ.
Issued Documents ನಲ್ಲಿ ಉತ್ತೀರ್ಣತಾ ಪ್ರಮಾಣ ಪತ್ರಗಳು ಇನ್ನು ಲಭ್ಯವಿಲ್ಲದಿದ್ದರೆ, 1 ದಿನ ಕಾದು ನಂತರ ಪ್ರಯತ್ನಿಸಿ.
ಕೆಪಿಎಸ್‌ಸಿ ಇಲಾಖಾ ಪರೀಕ್ಷೆಗಳು 2024 – ಪ್ರಥಮ ಅಧೀವೇಶನದ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಬ್ಬದ ಮುಂಗಡಕ್ಕೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್ ಮಾಡಿ.