ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು/ಮಂಡಳಿಗಳು/ನಿಗಮ ಇತ್ಯಾದಿ ಕಛೇರಿಗಳಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ “ನಗದು ಘೋಷಣೆ ವಹಿ”(Cash Declaration Register)ಯನ್ನು ನಿರ್ವಹಿಸುವಂತೆ ದಿ:04/02/2022ರಂದು ಸರ್ಕಾರವು ಆದೇಶವನ್ನು ಹೊರಡಿಸಿದೆ.

ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ: 79/2021(GM- KLA) ರಲ್ಲಿ ದಿನಾಂಕ 10.11.2021ರಂದು ನೀಡಿರುವ ಆದೇಶದನ್ವಯ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು/ ಮಂಡಳಿಗಳು/ ನಿಗಮಗಳು ಈ ಕೆಳಗಿನ ಕಾರ್ಯ ವಿಧಾನವನ್ನು ಅನುಸರಿಸಿ, ನಿಗದಿತ ನಮೂನೆಯಲ್ಲಿ ಈ ವಹಿ(Register)ಯನ್ನು ನಿರ್ವಹಣೆ ಮಾಡಬೇಕು.
ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡುವಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನ:
- ಸರ್ಕಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರ ವೈಯಕ್ತಿಕ ನಗದನ್ನು ಗಮನಿಸಲು ಪ್ರತಿ ಕೆಲಸದ ದಿನದ ಪ್ರಾರಂಭದಲ್ಲಿ “ನಗದು ಘೋಷಣಾ ವಹಿ”ಯನ್ನು ತೆರೆಯಬೇಕು.
- ಸರ್ಕಾರಿ ನೌಕರರು ಕೆಲಸದ ದಿನದಂದು ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಕಛೇರಿಗೆ ತಂದ ನಗದು ಮೊತ್ತವನ್ನು ನಿಗದಿತ ನಮೂನೆಯ “ನಗದು ಘೋಷಣಾ ವಹಿ”ಯಲ್ಲಿ ತನ್ನ ಸಹಿಯೊಂದಿಗೆ ನಮೂದಿಸಬೇಕು.
- ಈ ವಹಿಯು ಸಂಬಂಧಪಟ್ಟ ವಿಭಾಗ/ಶಾಖೆಯ ಗ್ರೂಪ್-ಬಿ ಅಧಿಕಾರಿಯ ವಶದಲ್ಲಿರಬೇಕು ಮತ್ತು ಈ ಅಧಿಕಾರಿಯು ನೌಕರರು ಮಾಡಿದ ನಮೂದುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾರೆ.
- ಯಾವುದೇ ನೌಕರರು ಈ ವಹಿಯಲ್ಲಿ ನಮೂದಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಕಂಡು ಬಂದರೆ, ಅಂತಹ ಹೆಚ್ಚುವರಿ ಹಣವನ್ನು ಅಕ್ರಮ ಸಂಪಾದನೆ ಎಂದು ಅರ್ಥೈಸಲಾಗುತ್ತದೆ ಹಾಗೂ ಅಂತಹ ಹೆಚ್ಚುವರಿ ಹಣವನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ನೌಕರರ ಹೊಣೆಯಾಗಿರುತ್ತದೆ.
- ಈ ವಹಿಯನ್ನು ಕಛೇರಿ ವೇಳೆಯ ಎಲ್ಲಾ ಸಮಯದಲ್ಲಿ, ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರಬೇಕು.
ದಿ:04/02/2024 ರಂದು ಹೊರಡಿಸಿದ ಸುತ್ತೋಲೆಗೆ ಲಗತ್ತಿಸಲಾದ ನಮೂನೆಯನ್ನು ಸರ್ಕಾರವು ಪರಿಷ್ಕರಿಸಿದ್ದು, ದಿ:14/03/2022 ರಂದು ಹೊರಡಿಸಿದ ಸುತ್ತೋಲೆಯನ್ವಯ ಈ ಕೆಳಕಂಡಂತೆ ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡಬೇಕು.

ನಗದು ಘೋಷಣೆ ವಹಿಯನ್ನು ನಿರ್ವಹಣೆ ಮಾಡುವ ಸಂಬಂಧ ಸರ್ಕಾರ ಹೊರಡಿಸಿದ ಸುತ್ತೋಲೆಗಳನ್ನು download ಮಾಡಿಕೊಳ್ಳಲು ಈ ಕೆಳಗಿನ ಲಿಂಕ್‌ಅನ್ನು ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕೃತ ಅಂತರ್ಜಾಲತಾಣವನ್ನು ವೀಕ್ಷಿಸಿ.
ಹಬ್ಬದ ಮುಂಗಡಕ್ಕೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು Download ಮಾಡಿಕೊಳ್ಳಲು ಕೆಳಗಿನ ಲಿಂಕ್‌ಅನ್ನು ಕ್ಲಿಕ್ ಮಾಡಿ.